ಮಂಡ್ಯ ಜಿಲ್ಲೆಯ ಬಗ್ಗೆ

ಮಂಡ್ಯ ಜಿಲ್ಲೆ

 

ಮಂಡ್ಯ ಜಿಲ್ಲೆಯು 76° 19′ ಮತ್ತು  77° 20′ ಪೂರ್ವ ಅಕ್ಷಾಂಶ ಮತ್ತು 12° 13′ ಮತ್ತು 13° 04′ ಪಶ್ಚಿಮ ರೇಖಾಂಶದ ನಡುವೆ ಇದ್ದು ಉತ್ತರದಲ್ಲಿ ಹಾಸನ ಮತ್ತು ತುಮಕೂರು ಜಿಲ್ಲೆಗಳಿಂದ ಸುತ್ತುವರೆದಿದ್ದುಪೂರ್ವದಲ್ಲಿ ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳುದಕ್ಷಿಣದಲ್ಲಿ ಮೈಸೂರು ಜಿಲ್ಲೆಮತ್ತು ಪಶ್ಚಿಮದಲ್ಲಿ ಮೈಸೂರು ಮತ್ತು ಹಾಸನ ಜಿಲ್ಲೆಗಳಿಂದ ಸುತ್ತುವರೆದಿರುತ್ತದೆ.

 

ಮಂಡ್ಯ ಜಿಲ್ಲೆಯು ತಾಲ್ಲೂಕುಗಳನ್ನು ಒಳಗೊಂಡಿದ್ದು, ಭೌಗೋಳಿಕ ವಿಸ್ತೀರ್ಣ 4,98,244 ಹೆಕ್ಟೇರ್ ನಷ್ಟಿದ್ದು, ಅದರಲ್ಲಿ 2,53,067 ಹೆಕ್ಟೇರ್ ಬಿತ್ತನೆಯ ಪ್ರದೇಶವಾಗಿರುತ್ತದೆಒಟ್ಟು ವಿಸ್ತೀರ್ಣದ ಪೈಕಿ ಅರ್ಧದಷ್ಟು ಭೂಮಿಯನ್ನು ಕೃಷಿಗಾಗಿ ಬಳಸಲಾಗುತ್ತಿದೆ. 94.779 ಹೆಕ್ಟೇರ್ ಗಳು ನೀರಾವರಿ ಭೂಮಿಯಾಗಿರುತ್ತದೆಒಟ್ಟು 19.25 ಲಕ್ಷ ಜನಸಂಖ್ಯೆ ಇದ್ದು ಆ ಪೈಕಿ ಸುಮಾರು ಲಕ್ಷ ಜನರು ವ್ಯವಸಾಯ ವೃತ್ತಿಯನ್ನು ಅವಲಂಭಿಸಿರುತ್ತಾರೆ.

 

ಜಿಲ್ಲಾ ಕೇಂದ್ರಸ್ಥಾನವು ಮಂಡ್ಯ ನಗರದಲ್ಲಿದ್ದು ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ನಡುವೆ ಇರುತ್ತದೆಮಂಡ್ಯ ನಗರವು ಬೆಂಗಳೂರಿನಿಂದ ಸುಮಾರು 100 ಕಿ.ಮೀ. ಹಾಗು ಮೈಸೂರಿನಿಂದ ಸುಮಾರು 40 ಕಿ.ಮೀ. ದೂರದಲ್ಲಿರುತ್ತದೆಮಂಡ್ಯ ಜಿಲ್ಲೆಯು ಇತರೆ ಪಟ್ಟಣಗಳಾದ ಮದ್ದೂರುಮಳವಳ್ಳಿಶ್ರೀರಂಗಪಟ್ಟಣನಾಗಮಂಗಲಕೃಷ್ಣರಾಜಪೇಟೆ ಹಾಗು ಪಾಂಡವಪುರ ಗಳನ್ನು ಒಗೊಂಡಿರುತ್ತದೆ.

 

ಮಂಡ್ಯ ಜಿಲ್ಲೆಯು ಕಲೆ ಮತ್ತು ಸಂಸ್ಕೃತಿಯ ನಾಡಾಗಿದ್ದುಹಳ್ಳಿಗಳಲ್ಲಿ ಆಗಿಂದ್ದಾಗ್ಗೆ ಪೌರಾಣಿಕ ನಾಟಕಗಳು ಜರುಗುತ್ತಿರುತ್ತವೆಜಾನಪದ ನಾಟಕನೃತ್ಯ ಮತ್ತು ಹಾಡುಗಳು ಗ್ರಾಮೀಣ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆದೇವಾಲಯಗಳಲ್ಲಿ ಉತ್ಸವಗಳು ಹಾಗೂ  ಗ್ರಾಮ ದೇವತೆಗಳ ಉತ್ಸವ ಮತ್ತು ಜಾತ್ರೆಗಳನ್ನು ಇಲ್ಲಿನ  ಜನರು ಬಹಳ ಉತ್ಸಾಹ ಹಾಗು ಸಂತೋಷದಿಂದ ಆಚರಿಸುತ್ತಾರೆಇವು ಸಂಪ್ರದಾಯಗಳಿಂದ ಕೂಡಿದ ವರ್ಣರಂಚಿತ ಪ್ರದರ್ಶನಗಳೆಂದು ಗುರುತಿಸಿಕೊಂಡಿವೆ.

 

2011ರ ಜನಗಣತಿಯ ಪ್ರಕಾರ ಮಂಡ್ಯ ಜಿಲ್ಲೆಯು 1,805,769 ರಷ್ಟು ಜನಸಂಖ್ಯೆಯನ್ನು ಹೊಂದಿದ್ದುಅದರ ಪೈಕಿ ಗಂಡು 905,085 ಹಾಗು ಹೆಣ್ಣು 900,684 ಆಗಿರುತ್ತದೆ. 2001ರ ಜನಗಣತಿಯ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ 1,763,705 ರಷ್ಟು ಜನಸಂಖ್ಯೆಯನ್ನು ಹೊಂದಿದ್ದುಆ ಪೈಕಿ ಗಂಡು 888,034 ಹಾಗು ಹೆಣ್ಣು 875,671 ರಷ್ಟು ಇತ್ತು.

 

ಮಂಡ್ಯ ಜಿಲ್ಲೆಯ ಬಗ್ಗೆ (2011 ಜನಗಣತಿಯ ಪ್ರಕಾರ)

ವಾಸ್ತವಿಕ ಜನಸಂಖ್ಯೆ

18,05,769

ಪುರುಷರು

9,05,085

ಸ್ತ್ರೀಯರು

9,00,684

ಜನಸಂಖ್ಯೆ ಬೆಳವಣಿಗೆ

2.38%

ವ್ಯಾಪ್ತಿ ಪ್ರದೇಶ ಚದರ ಕಿ.ಮೀ.

4,962

ಸಾಂದ್ರತೆ/ಕಿ.ಮೀ.

364

ಕರ್ನಾಟಕ ಜನಸಂಖ್ಯೆಗೆ ಅನುಪಾತ         

2.96%

ಸರಾಸರಿ ಸಾಕ್ಷರತೆ

70.40

ಪುರುಷ ಸಾಕ್ಷರತೆ

78.27

ಸ್ತ್ರೀ ಸಾಕ್ಷರತೆ

62.54

  

 

 

 

 

 

 

 

 

 

 

 

 

 

 

ನದಿಗಳು :

 

ಮಂಡ್ಯ ಜಿಲ್ಲೆಯು ಪ್ರಮುಖ ನದಿಗಳನ್ನು ಹೊಂದಿದ್ದುಕಾವೇರಿ ನದಿ ಮತ್ತು ಉಪನದಿಗಳನ್ನು ಹೊಂದಿರುತ್ತದೆ ಅವುಗಳೆಂದರೆ ಹೇಮಾವತಿಶಿಂಶಾಲೋಕಪಾವನಿ ಮತ್ತು ವೀರವೈಷ್ಣವಿ.

 

ಕಲೆ ಮತ್ತು ಸಂಸ್ಕೃತಿ :

 

ಮಂಡ್ಯ ಜಿಲ್ಲೆಯ ಸಂಸ್ಕೃತಿಯು ಕರ್ನಾಟಕ ರಾಜ್ಯದ ಇತರೆ ಸ್ಥಳಗಳಲ್ಲಿ ಆಚರಿಸಲ್ಪಡುವ ಸಂಪ್ರದಾಯಗಳಲ್ಲಿ ಒಂದಾಗಿರುತ್ತದೆಈ ಸಂಪ್ರದಾಯಗಳು ಹಿಂದಿನ ಪೀಳಿಗೆಯಿಂದ ನಡೆದು ಬಂದಿರುತ್ತದೆಈ ಜಿಲ್ಲೆಯು ಕಲೆ ವಾಸ್ತುಶಿಲ್ಪತಿಹಾಸಭಾಷೆ ಮತ್ತು ಕಲೆಗಳ ತಾಣವಾಗಿದೆಇದನ್ನು ತಲೆಮಾರುಗಳಿಂದ ನಿರ್ವಹಿಸುತ್ತಾ ಬಂದಿರುತ್ತದೆ.

 

ಮಂಡ್ಯ ಜಿಲ್ಲೆಯ ಜಾನಪದ ನಾಟಕಕ್ಕೆ ಸಂಬಂಧಿಸಿದಂತೆ ಲೇಖನ ರಚಿಸುವಲ್ಲಿ ಶ್ರೀ ಹೆಚ್.ಕೆ.ಯೋಗನರಸಿಂಹಹೊಸಹೊಳಲು ರವರನ್ನು ನೆನಪಿಸಿಕೊಳ್ಳದಿದ್ದಲ್ಲಿ ರಚನೆಯು ಅಪೂರ್ಣಗೊಂಡಂತಿರುತ್ತದೆನೂತನ ಜಾನಪದ ನಾಟಕದ ಕಲೆಯನ್ನು ಮಂಡ್ಯ ಜಿಲ್ಲೆಯ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಗೆಳೆಯರ ಬಳಗ ಸಂಘಟನೆಯ ಪಾತ್ರವು ಗಮನಾರ್ಹವಾಗಿರುತ್ತದೆಈ ಸಂಘಟನೆಯು ಅನೇಕ ಕಲಾತ್ಮಕ ನಾಟಕಗಳನ್ನು ಪ್ರದರ್ಶಿಸಿರುತ್ತದೆಇದಲ್ಲದೇ  ರಂಗಾಯಣನೀನಾಸಂ ಇತರೆ ಹಲವಾರು ಸಂಸ್ಥೆಗಳಗೆ ವೇದಿಕೆಯನ್ನು ಒದಗಿಸಿರುತ್ತದೆ. ಈ ಕ್ಷೇತ್ರಕ್ಕೆ ಶ್ರೀ ಕೆ.ವಿಶಂಕರೇಗೌಡರ ಕೊಡುಗೆಯು ಅಪಾರವಾಗಿದ್ದು ಅವರು ಶ್ರೀ ರಾಮಾಯಣ ದರ್ಶನಂ ಆಧಾರಿತ ಪಾದುಕ ಕೀರ್ತಿ’ ಎಂಬ ನಾಟಕವನ್ನು ರಚಿಸಿದ್ದಾರೆ.

 

ಮಂಡ್ಯ ಜಿಲ್ಲೆಯೂ ಕೂಡ ಗಂಜೀಫಾ ಕಲೆಗಾಗಿ ಪ್ರಸಿದ್ದವಾಗಿದ್ದುಪುರಾತನ ಭಾರತೀಯ ಗ್ರಂಥವಾದ ಚಿತ್ರ ಸೂತ್ರದಲ್ಲಿ ಈ ಕಲೆಯು ಅತ್ಯತ್ತಮವಾಗಿರುವ ಬಗ್ಗೆ ತಿಳಿಸುತ್ತದೆವರ್ಣಚಿತ್ರಗಳು ಮೆನೆಯ ಗೋಡೆಗಳನ್ನು ಅಲಂಕರಿಸಲು ಮಾತ್ರವಲ್ಲದೇ ಮಂಗಳ ವಾಸ್ತು’ ಎಂದು ಕೂಡ ಗ್ರಹಿಸಲಾಗಿದ್ದುನೋಡುಗರಿಗೆ ವರ್ಣಚಿತ್ರಗಳು ಸಂತೋಷ ಮತ್ತು ಶಾಂತಿಗಳನ್ನು ನೀಡುವ ಹಾಗು ಮನೆಗೆ ಸೌಂದರ್ಯ ಮತ್ತು ಒಳ್ಳೆಯ ವಾತಾವರಣ ನೀಡುತ್ತವೆ.

 

ಆರ್ಥಿಕತೆ :

 

ಮಂಡ್ಯ ಜಿಲ್ಲೆಯು ಕಾವೇರಿ ನದಿಯ ದಂಡಯಲ್ಲಿದ್ದುಕೃಷಿಯು ಮಂಡ್ಯಜಿಲ್ಲೆಯ ಆರ್ಥಿಕತೆ ಹಾಗು ಉದ್ಯೋಗಕ್ಕೆ ತನ್ನದೇ ಆದ ದೊಡ್ಡ ಕೊಡುಗೆಯನ್ನು ನೀಡಿದೆಜಿಲ್ಲೆಯಲ್ಲಿ ಭತ್ತಕಬ್ಬುಜೋಳಮೆಕ್ಕೆ ಜೋಳಹತ್ತಿಬಾಳೆರಾಗಿತೆಂಗಿನಕಾಯಿಕಾಳುಗಳು ಪ್ರಮುಖ ಬೆಳೆಗಳಾಗಿವೆ.

 

ಸಾರಿಗೆ :

 

ಮಂಡ್ಯ ಜಿಲ್ಲೆಯು ಭಾರತೀಯ ರೈಲ್ವೇ ವ್ಯವಸ್ಥೆಯ ನೈರುತ್ಯ ರೈಲು ವಿಭಾಗಕ್ಕೆ ಸೇರಿರುತ್ತದೆ.

ಮಂಡ್ಯ ನಗರವು ರಸ್ತೆ ಮತ್ತು ರೈಲು ಮಾರ್ಗಗಳಿಂದ ಕೂಡಿದ  ಉತ್ತಮ ಸಂಪರ್ಕವನ್ನು ಹೊಂದಿದ್ದುಬೆಂಗಳೂರು ಮತ್ತು ಮೈಸೂರು ನಡುವೆ ಚಲಿಸುವ ರೈಲುಗಳು ಮದ್ದೂರುಮಂಡ್ಯಪಾಂಡವಪುರ ಮತ್ತು ಶ್ರೀರಂಗಪಟ್ಟಣ ಮೂಲಕ ಚಲಿಸುತ್ತವೆ.

ಮಂಡ್ಯ ಜಿಲ್ಲೆಯು ವಿಸ್ತಾರವಾದ ರಸ್ತೆ ಸಂಪರ್ಕ ಹೊಂದಿದ್ದುಮಂಡ್ಯ ಜಿಲ್ಲೆಯಿಂದ ಹಾದುಹೋಗುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಈ ಕೆಳಕಂಡತೆ ಇರುತ್ತವೆ.

 

ರಾಷ್ಟ್ರೀಯ ಹೆದ್ದಾರಿಗಳು:

 

 1. ಎನ್.ಹೆಚ್ – 275 (ಬೆಂಗಳೂರು-ಬಂಟ್ವಾಳ)

 2. ಎನ್.ಹೆಚ್ – 209 (ಬೆಂಗಳೂರು-ದಿಂಡಿಗಲ್)

 3. ಎನ್.ಹೆಚ್ – 150() (ಶ್ರೀರಂಗಪಟ್ಟಣ-ಜೇವರ್ಗಿ)

 4. ಎನ್.ಹೆಚ್ – 75 (ಮಂಗಳೂರು-ಬೆಂಗಳೂರು)

 

ರಾಜ್ಯ ಹೆದ್ದಾರಿಗಳು:

 

 1. ಎಸ್.ಹೆಚ್ – 94 (ಹಲಗೂರು-ಚನ್ನಪಟ್ಟಣ)

 2. ಎಸ್.ಹೆಚ್ – 85 (ಬೆಂಗಳೂರು-ಜಲ್ಸೂರ್)

 3. ಎಸ್.ಹೆಚ್ – 84 (ಸಿರಾ-ನಂಜನಗೂಡು)

 4. ಎಸ್.ಹೆಚ್ – 79 (ಶ್ರೀರಂಗಪಟ್ಟಣ-ಬನ್ನೂರು)

 5. ಎಸ್.ಹೆಚ್ – 47 (ಮಂಡ್ಯ-ಗುಬ್ಬಿ-ಹೂವಿನಹಡಗಲಿ)

 6. ಎಸ್.ಹೆಚ್ – 33 (ಪಾವಗಡ-ಮದ್ದೂರು-ಮಳವಳ್ಳಿ)

 7. ಎಸ್.ಹೆಚ್ – 07 (ಬೆಂಗಳೂರು-ಜಲ್ಸೂರ್)

 

ಪ್ರವಾಸೋದ್ಯಮ

 

ಮಂಡ್ಯ ಜಿಲ್ಲೆಯು ಹಲವಾರು ಪ್ರೇಕ್ಷಣೀಯ ಸ್ಥಳಗಳ ಮೂಲಕ ಪ್ರವಾಸಿಗರಿಗೆ ಕೇಂದ್ರ ಬಿಂದುವಾಗಿದೆಕೃಷ್ಣರಾಜ ಸಾಗರ ಅಣೆಕಟ್ಟುರಂಗನತಿಟ್ಟು ಪಕ್ಷಿಧಾಮಕೊಕ್ಕರೆ ಬೆಳ್ಳೂರುಐತಿಹಾಸಿಕ ಶ್ರೀರಂಗಪಟ್ಟಣಶಿವನಸಮುದ್ರ ಜಲಪಾತಕಾವೇರಿ ಮೀನುಗಾರಿಕೆ ಶಿಬಿರದೇವಸ್ಥಾನಗಳ ಪಟ್ಟಣಗಳೆಂದು ಖ್ಯಾತಿಪಡಿದಿರುವ ಮೇಲುಕೋಟೆತೊಣ್ಣೂರು ಕೆರೆ ಇವುಗಳು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾಗಿರುತ್ತವೆ.

ಇತ್ತೀಚಿನ ನವೀಕರಣ​ : 19-07-2019 01:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಡ್ಯ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ